ಬಂಧುಗಳೇ,

                  ಮಲೆನಾಡಿನ ದೀವರ ಇತಿಹಾಸದಲ್ಲಿ ದೀವರ ಹೆಸರಿನ ಸಂಘಟನೆಯೊಂದು ದೀವರ ಬ್ಯಾನರ್ ನಡಿ ದೀವರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಮಿತಿಯ ಹೆಸರಿನಡಿ ಉದ್ಘಾಟನೆ ಆಗುತ್ತಿರುವುದು ಹೆಮ್ಮೆಯ ಸಂಗತಿ.ಗತಕಾಲದಲ್ಲಿ ಸ್ವಾಭಿಮಾನಕ್ಕೆ ಹೆಸರಾದ ನಾವುಗಳು ವಿದ್ಯಾವಂತರಾಗಿ ಸ್ವಾವಲಂಬಿಗಳಾಗಿ ಯಾರದೇ ಹಂಗಿಲ್ಲ ಬದುಕು ಕಟ್ಟಿಕೊಂಡ ಮೇಲೆಯೂ ದಾಸ್ಯದ ಕುರುಹುಗಳು ಇಂದಿಗೂ ಮನೆಮಾಡಿವೆ.ಸೆಟೆದು ನಿಲ್ಲಬೇಕಾದ ಜಾಗದಲ್ಲಿ ನಡುಬಗ್ಗಿಸಿ ದೈನೇಸಿಯಾಗಿ ಆತಂಕಿತರಾಗಿ ಖಿನ್ನತೆಯಿಂದ ಪ್ರೇತಾತ್ಮಗಳಂತೆ ಬಣ್ಣದ ಉಡುಪು ತೊಟ್ಟು ಸೊಪೆಸ್ಟಿಕೇಟೆಡ್ ಮುಖವಾಡ ಹೊತ್ತು ನಿರ್ವಿಕಾರವಾಗಿ ಸಾಮುದಾಯಿಕ ಉತ್ತರದಾಯಿತ್ವವಿಲ್ಲದೆ ಯಾರದೋ ನೆರಳನ್ನು ಈ ಕ್ಷಣಕ್ಕೂ ಆಶ್ರಯಿಸುವುದು ಅಕ್ಷಮ್ಯ.ಈ ಸಂಕ್ರಮಣ ಕಾಲದಲ್ಲಿ ಶಿವಮೊಗ್ಗೆಯಲ್ಲಿ ಸಮಿತಿಯ ನೇತೃತ್ವದಲ್ಲಿ "ಧೀರದೀವರು "ಪ್ರಶಸ್ತಿಯನ್ನು ನೀಡುತ್ತಿರುವುದು ಜನಾಂಗದ ಚರಿತ್ರೆಯಲ್ಲಿ ಬರೆದಿಡಬೇಕಾದ ಘಟನೆ ಎಂದು ನಾನಂದುಕೊಳ್ಳತ್ತೇನೆ.ಸಮುದಾಯದ ಪ್ರಗತಿ ಅಥವ ಆಸ್ಮಿತೆಗೆ ತಾವೇ ಭಾಗವಾಗುವುದರ ಜೊತೆಗೆ ಚಾರಿತ್ರಿಕ ವ್ಯಕ್ತಿಗಳಾಗಿ ಹೊರಹೊಮ್ಮಿದ ಮೇರುನಾಯಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಹೆಮ್ಮೆ.ಈ ಕೆಲಸ ಬಹು ವರ್ಷಗಳ ಹಿಂದೆಯೇ ಆಗಬೇಕಿತ್ತು .ಕಾರಣ ದೀವರ ಧೀರೋದ್ದಾತ್ತ ವ್ಯಕ್ತಿತ್ವಕ್ಕೆ ಹೆಸರಾದ ಎಚ್ ಗಣಪತಿಯಪ್ಪ, ಮತ್ತು ಎಸ್ ಬಂಗಾರಪ್ಪನವರಿಗೆ ಈ ಪ್ರಶಸ್ತಿ ಸಲ್ಲಬೇಕಾಗಿತ್ತು.ಅಂತೆಯೆ ದೀವರ ಸ್ವಾಭಿಮಾನದ ಕಿಡಿಗಳಾದ ಕಣಸೆ ಜಟ್ಯಾನಾಯ್ಕ ಮನೆಘಟ್ಟದ ಚೌಡಪ್ಪ ಕುಪ್ಪಗಡ್ಡೆ ಕರಿಯಪ್ಪ ತವನಂದಿ ನಿಂಗಪ್ಪರಂತ ಮಹಾನ್ ಧೀರರು ಹುಟ್ಟಿ ಶೋಷಣೆಯ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಮಹಾನ್ ಚೇತನಗಳು....ಈಗ ಅವರಂತೆ ಹೋರಾಟ ದ ಯಾವ ತುರ್ತುಗಳೂ ನಮ್ಮಲ್ಲಿಲ್ಲ.ಆದರೆ ಇಂಥ ಕಾರ್ಯಕ್ರಮಗಳಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ನಮ್ಮ ಒಗ್ಗಟ್ಟು, ನಮ್ಮ ಸ್ವಾಭಿಮಾನವನ್ನು ವ್ಯಕ್ತಪಡಿಸಬೇಕಾಗಿದೆ.ವ್ಯರ್ಥವಾಗಿ ಕಡುಸ್ವಾರ್ಥಿಗಳ ದುರಾಲೋಚಗಳಿಗೆ ಕಿವಿಗೊಡದೆ ಎಲ್ಲರೂ ಬಂದು ಒಂದಾಗಿ ಸೇರುವ ಕಾಲ ಸನಿಹಿತವಾಗಿದೆ.ಹಾಗಾದರೆ ಮಾತ್ರ ನಾವು ಧೀರರೂ ಹೌದು ಶೂರರೂ ಹೌದು.ಇಲ್ಲವಾದಲ್ಲಿ ನಮ್ಮನ್ನೇ ಮುಗಿಸಹೊರಟ ವೈರಿಗಳ ಬತ್ತಳಿಕೆಯಲ್ಲಿನ ಬಾಣ ನಾವೇ ಆಗುವುದರಲ್ಲಿ ಅನುಮಾನವೇ ಇಲ್ಲ
ಭಾರತವೆಂಬ ತುಂಬು ಸಂಸ್ಕೃತಿಯ ನಾಡಿನಲ್ಲಿ ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ವಿಶಿಷ್ಟ ಸಂಸ್ಕೃತಿಗಳಿವೆ.ರಾಜಕೀಯದ ಶಡ್ಯಂತ್ರಗಳಿಂದಾಗಿ ಪಟ್ಟಭದ್ರರಾಗುವ ಹುನ್ನಾರದಿಂದ ಅವುಗಳನ್ನು ಜಾತಿಗಳೆಂದು ಪರಿಗಣಿಸಿ ,ಸಂಸ್ಕೃತಿಗಳನ್ನು ವಿನಾಶದ ತಳ್ಳಿದ ಕರಾಳ ಕೆಲಸಗಳು ನಡೆದುಹೋಗಿವೆ.ಹಾಗಗಿ ಸಂಸ್ಕೃತಿಯ ವೈಶಿಷ್ಟತೆಯನ್ನು ಅನಾವರಣಗೊಳಿಸುವ ಕಾರ್ಯವನ್ನು ಜತನದಿಂದ ಮಾಡುವದು ಅನಿವಾರ್ಯವಾಗಿದೆ. ಈ ಸದುದ್ದೇಶದಿಂದ ದೀವರು ಎನ್ನುವ ಸಂಸ್ಕೃತಿನ್ನು ಅದನ್ನು ಇದ್ದ ಹಾಗೆ ದಾಖಲಿಸಿಅದರ ವೈಶಿಷ್ಟತೆಯನ್ನು ಕಾಪಾಡುವುದು ನಮ್ಮ ಈ websiteನ ಮುಖ್ಯ ಕಾರ್ಯ.
ಈ ವೆಬ್ ಸೈಟ್ ಅಭಿವೃದ್ದಿ ಪಡಿಸಲು ದೀವರ ಜನಾಂಗದ ಯಾರೂ ಬೇಕಾದರೂ ಸಲಹೆ ಸೂಚನೆಗಳನ್ನು ನೀಡಬಹುದು ಮತ್ತು ಲೇಖನಗಳನ್ನು ಬರೆದು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಲು ಕೋರಿದೆ.
 ಸಂಪರ್ಕಿಸಿ---9008920132  ಇಮೇಲ್: info@invanceinfotech.com