ಈ ಸಮಯದಲ್ಲಿ ನಾರಾಯಣನ ತಂದೆ ರಂಗನಾಯ್ಕ ಹೇಗೋ  ನಾರಾಯಣನನ್ನು ಬೇಟಿ ಮಾಡುತ್ತಾನೆ. ರಂಗನಾಯಕ್ ಹಾಗೂ ಭಾಮಿನಿಯ ಕಳೆದುಹೋದ ಮಗ ತಾನೇ ಎಂದು ಗೊತ್ತಾಗುತ್ತದೆ. ರಂಗನಾಯಕ್ ಮಗನನ್ನು ಕಳೆದುಕೊಮಡ ಚಿಂತೆಯಲ್ಲಿ ಸೊರಗಿ ಹೋಗಿರುತ್ತಾನೆ. ರಾಜ ಗೋಪಾಲಕೃಷ್ಣ ರಾಜನಿಗೆ ನಾರಾಯಣನ ದೈನ್ಯತೆಯ ಮೂಲ ತಿಳಿಯುತ್ತದೆ. ನಂತರ ರಾಜ, ನಾರಾಯಣನಿಗೆ ಟಂಕಸಾಲೆಯ ಉಸ್ತುವಾರಿಯನ್ನು ವಹಿಸಿಕೊಟ್ಟು ಹಳೆಪೈಕ ಎಂಬ ಹಳ್ಳಿಯನ್ನು ಅವನಿಗೆ ಹಾಗೂ ಅವನ ಪೂರ್ವಜರಿಗೂ ಅನುಭವಿಸಲು ಜಾಗೀರು ಕೊಡುತ್ತಾನೆ. ಈ ಸಮಯದಲ್ಲಿ  ನಾರಾಯಣದ ಕೆಲವು ವಂಶಸ್ತರು  ಯಾತ್ರೆಗೆ ಹೊರಡುತ್ತಾರೆ. ಅವರು ರಾಮೇಶ್ವರ, ಕಾಶಿ, ತಿರುಪತಿ, ವೆಂಕಟಪ್ಪನಾಯಕ, ಕೆಳದಿಯ ಸಂಕಣ್ಣನಾಯಕನ ಅಸ್ಥಾನಕ್ಕೂ ಭೇಟಿ ಕೊಡುತ್ತಾರೆ. ಅವರಿಗೆ ಅನೆಗೊಂದಿ ಹಾಗೂ ಚಂದಾವರದಲ್ಲಿ ಆಸ್ಥಾನದಲ್ಲಿ ಪ್ರಮುಖ ಖಾತೆಗಳನ್ನು ಕೊಡಲಾಯಿತು. ಆದ್ದರಿಂದ ಅವರು ಕುಮಟಾ ತಾಲ್ಲೂಕಿನ ಚಂದಾವರದಲ್ಲಿ ವಾಸಿಸತೊಡಗಿದರು.
    ಆದರೆ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಈ ಕಥೆಗೆ ಪೂರಕವಾದ ಯಾವುದೇ ಆಧಾರ ಸಿಗುವುದಿಲ್ಲ. ಕುಮಾರಕ್ಷೇತ್ರ ಅಥವಾ ಹಳೇಪೈಕ ಎಂಬ ಹಿನ್ನೆಲೆಯುಳ್ಳ ಹಳ್ಳಿಗಳು ಎಲ್ಲೂ ಕಂಡುಬರುವುದಿಲ್ಲ. ಈ ಕತೆ ಶಕವರ್ಷ 1143 ಅಂದರೆ ಕ್ರಿ.ಶ.1221ನೇ ವರ್ಷದಲ್ಲಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿರುವುದು ಕ್ರಿ.ಶ.1336ನೇ ವರ್ಷ.
    ದೀವರ ಜನಾಂಗದ ಮೂಲದ ಬಗ್ಗೆ ಎರಡು ಪುರಾಣದ ದಂತಕಥೆಗಳಿವೆ. ಒಮ್ಮೆ ಈಶ್ವರ-ಪಾರ್ವತಿಯರು ವಿಹರಿಸುತ್ತಿದ್ದಾಗ ಪಾರ್ವತಿಗೆ ಬಾಯಾರಿಕೆಯಾಗುತ್ತದೆ. ಆಗ ಈಶ್ವರ ತನ್ನ ಬೆವರಿನಿಂದ ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡಿ ಅವನಿಗೆ “ದೀವ” ಎಂದು ಹೆಸರಿಟ್ಟು “ಬಗಿನಿ” ಮರದಿಂದ ರಸ ತೆಗೆಯಲು ಆದೇಶ ನೀಡುತ್ತಾನೆ. ಬಗಿನಿ ಮರದ ರುಚಿಯಾದ ರಸವನ್ನು ಕುಡಿದ ಪಾರ್ವತಿ ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳಲು ಹೇಳುತ್ತಾಳೆ.
    ಒಮ್ಮೆ ಬ್ರಹ್ಮನಿಗೆ ಬಹಳ ಬಾಯಾರಿಕೆಯಾಗಿ ಒಬ್ಬ ಮನುಷ್ಯನಿಗೆ ಕತ್ತಿ ಹಾಗೂ ಬಾಣವನ್ನು ಕೊಟ್ಟು ತೆಮಗಿನಮರದಿಂದ ರಸ ತೆಗೆಯಲು ಹೇಳುತ್ತಾನೆ. ಬ್ರಹ್ಮ ತೆಂಗಿನಮರದ ರಸವನ್ನು ಕುಡಿದು ಸಂತುಷ್ಟನಾಗಿ ಮನುಷ್ಯ ಇದೇ ಉದ್ಯೋಗವನ್ನು ಮುಂದುವರೆಸು ಎಂದು ಆಶೀರ್ವದಿಸುತ್ತಾನೆ.
    ಸುಮಾರು 130 ವರ್ಷಗಳ ಹಿಂದೆ ತಿರುವಾಂಕೂರಿನ ರಾಜನ ಸೈನ್ಯದಲ್ಲಿ ನಾಯರ್ ಗಳ ಜೊತೆಗೆ ಇವರನ್ನು ಸೈನ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಆಗ ಅವರ ನಾಯಕನೆಂದರೆ “ಅಂಬಲಪೂಜ” ಹಾಗೂ ಪುರಕಾಡದ ರಾಜ. ಹಾಗೇಯೇ ಉತ್ತರ ಮಲಬಾರಿನ ತಿಯ್ಯಾನರದು ಒಂದು ಮಿಲಟರಿ ವರ್ಗವೇ ಇತ್ತು. ತೆಲಚೇರಿಯಲ್ಲಿ ಸಾವಿ ಸೈನಿಕರ ತಿಯ್ಯಾ ರೆಜಿಮೆಂಟ್ ಇತ್ತು. ಎಲ್ಲಾ ಸೈನಿಕರೂ ತಿಯ್ಯಾ ಜನಾಂಗದವರೇ ಆಗಿದ್ದರು. ಶೌರ್ಯ ಹಾಗೂ ಸಾಹಸಕ್ಕೆ ಹೆಸರುವಾಸಿಯಾಗಿದ್ದರು. ತಮ್ಮ ಜನಾಂಗದ ಹಳೇಕಾಲದ ಶ್ರೇಷ್ಟತೆಯನ್ನು, ಈಗ ಮದುವೆಯ ಸಂದರ್ಭದ ವಸ್ತ್ರಾಲಂಕಾರದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಮದುವೆಯ ಸಂದರ್ಭದಲ್ಲಿ ನಿಲುವಂಗಿ, ಚೂಪಾದ ಪೇಟ ಸುತ್ತಿ ಕಚ್ಚೆಪಂಚೆ ಉಟ್ಟು ಸೋಟದಲ್ಲಿ ಕತ್ತಿಯನ್ನು ಸಿಕ್ಕಿಸಿರುತ್ತಾರೆ. ಮದುಮಗನ ಪಕ್ಕದಲ್ಲಿ ಇಬ್ಬರು ಬಲಗೊಡೆಯರು ಕೈಯಲ್ಲಿ ಬಿಚ್ಚುಗತ್ತಿ ಹಾಗೂ ಗುರಾಣಿಯನ್ನು ಹಿಡಿದಿರುತ್ತಾರೆ. ಇದೆಲ್ಲವೂ ಯುದ್ದದ ವೃತ್ತಿಯನ್ನು ಬಿಂಬಿಸುತ್ತದೆ.
    ಕೆಳದಿ ರಾಣೀ ಚೆನ್ನಮ್ಮಾಜಿಯ ಕಾಲದಲ್ಲಿ ಕಾಸರಗೋಡು ತಿಮ್ಮಣ್ಣನಾಯಕ ಎಂಬ ಮಹಾದಂಡಾನಾಯಕ ಇದ್ದ. ಮರಾಠರ ರಾಜ ಶಿವಾಜಿ ಮಹಾರಾಜನ ಮಗ ರಾಜಾರಾಮನಿಗೆ ಚೆನ್ನಮ್ಮಾಜಿ ಆಶ್ರಯ ನೀಡಿದಾಗ ಔರಂಗಜೇಬದ ಸೈನ್ಯವನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿನೆಂದೂ, ಈತ ದೀವರ ಜನಾಂಗದವನಾಗಿದ್ದನೆಂದೂ ಜನಪದ ವಿದ್ವಾಂಸರಾದ ದಿವಂಗರ.ಡಾ.ಎಸ್.ಆರ್.ಹೆಗಡೆಯವರು ಹೇಳುತ್ತಾರೆ. ಉತ್ತರಕನ್ನಡ ಜಿಲ್ಲೆಯ ಹೊಸಾಕುಳಿ ಬೆಳ್ಳಿಯಮ್ಮ ಎಂಬ ನಾಮಧಾರಿ ಮಹಿಳೆಯಿಂದ ಕಾಸರಗೋಡು ತಿಮ್ಮಣ್ಣನಾಯಕ ಎಂಬ ಐತಿಹಾಸಿಕ ಕಥನಗೀತೆಯ್ನು ಸಂಗ್ರಹಿಸಿ ಬೆಳ್ಳಿಯಮ್ಮನ ಹಾಡುಗಳು ಎಂಬ ಕೃತಿಯಲ್ಲಿ ಪ್ರಕಟಿಸಿದ್ದಾರೆ. ಈ ಗೀತೆ ದೀವರು ಕೆಳದಿನಾಯಕರ ಸೈನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಕ್ಕೆ ಬೆಳಕು ಚೆಲ್ಲುತ್ತದೆ.
    ಮೈಸೂರಿನ ಹಾಗೂ ಕರಾವಳಿಯ ಹಳೆಪೈಕದವರು ಮಲಬಾರಿನ ಇಜುವಾನರು ಅಥವಾ ತಿಯ್ಯಾನರು (ಧ್ವೀಪಾರ್ ಅಥವಾ ದೀವರ್ ಅಂದರೆ ದ್ವೀಪದವರು) ಒಂದೇ ಗುಂಪಿಗೆ ಸೇರಿದವರು. ಇಜುವಾನರು ಅಥವಾ ತಿಯ್ಯಾನರು ಶ್ರೀಲಂಕಾದಿಂದ ವಲಸೆ ಬಂದ ಶಾನರ್ ವಸಾಹತಿನವರೆಮದು ಹೇಳಲಾಗುತ್ತದೆ. ಅವರು ಪಶ್ಚಿಮ ಕರಾವಳಿಯ ಕಡೆ ವಲಸೆ ಬಂದಾಗಿ ತೆಂಗಿನಗಿಡ ಹಾಗೂ ತಾಳೆಮರವನ್ನು ತಮ್ಮೊಡನೆ ತರುತ್ತಾರೆ. ಈಗಲೂ ಕೂಡ ಅವರ ಉದ್ಯೋಗ ತಾಳೆ ಹಾಗೂ ತೆಂಗಿನಮರದ ಕೃಷಿಯಾಗಿದೆ.
    ಕ್ರಿ.ಶ ಹಾಗೂ ಕ್ರಿ.ಪೂ.ಗಳಲ್ಲಿ ಶ್ರೀಲಂಕಾದ ಮೇಲೆ ಬಹಳಷ್ಟು ಜನಾಂಗಗಳ ದಾಲಿ ನಡೆಯಿತು. ಮೂಲದ್ರಾವಿಡರು ಶ್ರಿಲಂಕಾದಿಂದ  ಉತ್ತರದ ಕಡೆ ಅಂದರೆ ತಿರುವಾಂಕೂರು ಹಾಗೂ ಪಶ್ಚಿಮ ಕರಾವಳಿಯ ಕಡೆ ವಲಸೆ ಬಂದರು. ಬರುವಾಗ ಜೊತೆಗೆ ತೆಂಗಿನಗಿಡವನ್ನು ತಂದರು. ಇವರು ತೀವರ್ (Tivar, Islanders) ಅಥವಾ ಇರವರ್ (Iraver) ಎಂದು ಕರೆಸಕೊಂಡರು. ನಂತರ ಅವರೇ ತೀಯರ್ ಅಥವಾ ಇಲವಾರ್ ಎಂದಾದರು. ಅನಂತರದಲ್ಲಿ ಇವರು ಉತ್ತರ ಜಿಲ್ಲೆ ಉತ್ತರ ಕರಾವಳಿಯಲ್ಲಿ ದೀವರು ಅಥವಾ ಹಳೆಪೈಕದವರಾದರು. ಘಟ್ಟದ ಮೇಲಿನ ಮಂಜರಾಬಾದ್, ಪ್ರದೇಶವು ಹುಂಚ ಕುಟುಂಬದವರಿಂದ ಆಳಲ್ಪಡುತ್ತಿತ್ತು. ಇವರೇ ನಂತರ ಕಾರ್ಕಳದ ಬಕ್ಷಿರಸು, ವಡೆಯರು ಎಂದು ಖ್ಯಾತಿ ಗಳಿಸಿದರು. ಇವರು ದೇವರ ಮಕ್ಕಳು ಎಂದು ಕರೆಸಿಕೊಳ್ಳುತ್ತಿದ್ದರು. ಬಹುಶ: ದೀವರ ಮಕ್ಕಳು ಎಂಬುದು ದ್ವೀಪದ ಮಕ್ಕಳು ಎಂಬ ಪದದ ಅಪಭ್ರಂಶವಾಗಿದೆ ಎಂದು ಎಲ್.ಕೆ.ಅನಂತಕೃಷ್ಣ ಅಯ್ಯರ್ ರವರು ತಮ್ಮ The Mysore Tribes and Caste ಎಂಬ ಗ್ರಂಥದ ಮೂರನೇ ಸಂಪುಟದಲ್ಲಿ ನಮೂದಿಸಿದ್ದಾರೆ.
    ಹಳೇಪೈಕ ಅಥವಾ ದೀವರನ್ನು ತೀಯಾನರಿಗೆ ಹೋಲಿಸಿದೆ ಬಹುತೇಕ ಸಾಮಾನ್ಯ ಲಕ್ಷಣಗಳನ್ನೇ ಹೊಂದಿರುವುದು ಕಂಡುಬರುತ್ತದೆ. ಇಬ್ಬರಲ್ಲೂ ಬಳಿ(ಗೋತ್ರ)ವನ್ನು ಹೆಣ್ಣಿನ ಮೂಲಕ ಗುರುತಿಸುವುದು ಹಾಗೂ ಅವರು ಇಳಿಸು ಹೆಂಡದಮರಗಳ ಮೂಲಕ ಗುರುತಿಸುವುದು ರೂಡಿಯಲ್ಲಿದೆ, ದೈಹಿಕ ರೂಪದಲ್ಲೂ ಸಾಮಾನ್ಯ ಲಕ್ಷಣಗಳಿವೆ.
    ಅರಸರು ಬೇಟಿಯಾಡುವಾಗ ಬೇಟೆಯಲ್ಲಿ ದೀವು ಕಟ್ಟುವ ಒಂದು ವಿಶಿಷ್ಟ ಸಂಪ್ರದಾಯವಿತ್ತು. ಆ ಕೆಲಸವನ್ನು ಧಿವರು ಜನಾಂಗದವರು ಮಾಡುತ್ತಿದ್ದರಿಂದ ಇವರಿಗೆ “ದೀವರು” ಎಂಬ ಹೆಸರು ಬಂತೆಂದು ಸಾಮಾನ್ಯ ಅಭಿಪ್ರಾಯವಾಗಿದೆ. ಹಳೆಪೈಕರಲ್ಲಿ ಪುಂಡೇರು ಮತ್ತು ಕೆಂಚಯ್ಯರು ಎಂಬ ಎರಡು ಉಪಜಾತಿಗಳಿವೆ. ಹಿಂದೆ ಇವರಲ್ಲಿ ದೀವರು ಸಹಬೋಜನ ಮಾಡುತ್ತಿರಲಿಲ್ಲ, ವಿವಾಹ ಸಂಬಂಧಗಳು ನಡೆಯುತ್ತಿರಲಿಲ್ಲ, ಈಗ ಇವೆಲ್ಲಾ ಮಾಯವಾಗಿದೆ.
    ಹಳೆಪೈಕರಿಗೆ “ನಾಮಧಾರಿ” ಎಂಬ ಹೆಸರು ಹೇಗೆ ಬಂತು ಎಂದು ತಿಳಿಯೋಣ. ತ್ರಿಮತಸ್ತರಲ್ಲಿ ಒಬ್ಬರಾದ  ಶ್ರೀರಾಮಾನುಜಚಾರ್ಯರು ಕರ್ನಾಟಕದಲ್ಲಿ ತಮ್ಮ ಭೋದನೆಯಿಂದ ಅನೇಕ ಹಿಂದುಳಿದ ಸಮೂಹಗಳನ್ನು ತಮ್ಮ ಅನುಯಾಯಿಗಳನ್ನಾಗಿ ಅಕರ್ಷಿಸಿದರು. ಶೂದ್ರರಿಗೂ ಗಾಯಿತ್ರಿ ಮಂತ್ರವನ್ನು ಉಚ್ಚರಿಸುವ ಹಕ್ಕು ಇದೆ ಎಂದು ಸಾರಿದರು. ಶೂದ್ರ ಜನಾಂಗದ ಅನೇಕ ಜಾತಿಯವರಿಗೆ ನಾಮಧಾರಣ ಮಾಡಿ ವೈಷ್ಣವ ಪಂಥಕ್ಕೆ ಸೇರಿಸಿಕೊಂಡರು. ಹಳೆಪೈಕರಲ್ಲೇ ಬಹುತೇಕ ಜನರು ವೈಷ್ಣವ ಪಂಥಕ್ಕೆ ಸೇರಿ ನಾಮಧಾರಣ ಮಾಡಿಸಿಕೊಂಡರು.
    ಕರಾವಳಿಯ ತೆಂಗಿನದೀವರಲ್ಲಿ ಎರಡು ಗುಂಪುಗಳಾದವು. ನಾಮಧಾರಿಗಳು ಮತ್ತು ತ್ರಿನಾಮದಾರಿಗಳು ಎಂದು. ನಾಮಧಾರಿಗಳು ತಮ್ಮ ಹಣೆಯಲ್ಲಿ ಒಂದೇ ನಾಮ ಹಾಕಿಕೊಳ್ಳುವರು ತ್ರಿನಾಮಧಾರಿಗಳು ಮೂರು ನಾಮದಾರಣೆ ಮಾಡಿಕೊಳ್ಳವರು. ಇವೆರಡು ಗುಂಪುಗಳಲ್ಲಿ ಪರಸ್ಪರ ಮದುವೆ ಸಂಬಂಧಗಳು ನಡೆಯುತ್ತವೆ. ಎರಡೂ ಗುಂಪುಗಳ ಹುಡುಗ-ಹುಡುಗಿ ಮುದ್ರಾದಾರಣ ಮಾಡಿಕೊಳ್ಳಬೇಕು. ತ್ರಿನಾಮಧಾರಿಗಳು ಅದೇ ಗುಂಪಿನ ಹುಡುಗಿಯನ್ನು ಮದುವೆಯಾಗುವುದಾದರೆ ಮುದ್ರಾದಾರಣ