ಪ್ರೀತಿಯ ಬಂಧುಗಳೆ,
ದೀವ ಜನಾಂಗದ ಜನಜೀವನ, ಕಲೆ ಮತ್ತು ಸಂಸ್ಕೃತಿಯ ಅನಾವರಣದ ಸಲುವಾಗಿ ಸಿರ್ಮಿಸಲಾಗುತ್ತಿರುವ ವೆಬ್ ಸೈಟ್ www.deevaru.com ಗೆ ನಿಮಗೆಲ್ಲ ಸ್ವಾಗತ.
ವೇದಿಕೆಯ ವತಿಯಿಂದ ದಿನಾಂಕ 26-12-2021 ಭಾನುವಾರ ದಂದು ಸಂಜೆ 4.30 ಗಂಟೆಗೆ ಜರುಗಲಿರುವ ಸಮಾಜದ ಸಾಧಕರಿಗೆ ಸನ್ಮಾನ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಬಂಧುಗಳು, ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಆಗಮಿಸಿ ಯಶಸ್ವೀಗೊಳಿಸಬೇಕಾಗಿ ವಿನಂತಿ.
ಸ್ಥಳ: ಶಿವಮೊಗ್ಗ ಪೊಲೀಸ್ ಲೇ ಔಟ್ ನಲ್ಲಿರುವ ಪೊಲೀಸ್ ನಿವೃತ್ತ ನೌಕರರ ಸಭಾಭವನ, ಶಿವಮೊಗ್ಗ. ಸಮಯ: ಸಂಜೆ : 4.30 ರಿಂದ.
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ,ಶಿಕಾರಿಪುರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಉತ್ತರಕನ್ನಡ ಜಿಲ್ಲಯ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ವಾಸವಾಗಿರುವ ಒಂದು ವೈಶಿಷ್ಟಪೂರ್ಣ ಜನಾಂಗ “ದೀವರು”. ಈ ಜನಾಂಗದವರು ಹೆಚ್ಚಾಗಿ ಸಹ್ಯಾದ್ರಿ ಬೆಟ್ಟಗಳ ತಪ್ಪಲುಗಳ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಇವರಿಗೆ ಹಳೆಪೈಕ, ದೀವರು, ನಾಮಧಾರಿಗಳು, ನಾಮಧಾರಿ ವಿಷ್ಣುಭಕ್ತರು, ಹಾಲಕ್ಷತ್ರಿಯ, ಕುಮಾರಕ್ಷತ್ರಿಯ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ದೀವರಲ್ಲಿ ಬಿಯಿನೆ(ಬಗಿನೆ) ದೀವರು ಅಥವಾ ಕಾನುದೀವರು ಮತ್ತು ತೆಂಗಿನ ದೀವರು ಎಂದು ಎರಡು ಪಂಗಡಗಳಿವೆ. ಕಾನುದೀವರು ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲ್ಲೂಕುಗಳಲ್ಲಿ ಹೇರಳವಾಗಿ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ವಿರಳವಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಚದುರಿಕೊಂಡಂತೆ ಇದ್ದಾರೆ. ತೆಂಗಿನದೀವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲ ತಾಲ್ಲೂಕುಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ, ದಕ್ಷಿಣಕನ್ನಡ ಜಿಲ್ಲೆಯ ಬಿಲ್ಲವರು, ಕೇರಳದ ತಿಯ್ಯಾನರು, ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕಿನ ದೀವರು ಮೂಲತ: ಒಂದೇ ಬುಡಕಟ್ಟಿಗೆ ಸೇರಿದವರು. ಈ ಎಲ್ಲಾ ಗುಂಪುಗಳು ಹಳೇಪೈಕದವರು. ಈ ಗುಂಪುಗಳ ಮೂಲ ಹೆಸರು ಹಳೇಪೈಕ ಅಥವಾ ಹಳೇಪಾಯಕ ಎಂದು. ಹಳೆ ಎಂದರೆ ಪುರಾತನ ಹಳೆಯ “ಪಾಯಕ” ಎಂದರೆ ಸೈನಿಕ, ಪದಾತಿದಳ, ಕಾಲಾಳು ಎಂದರ್ಥ.
ಇವರು ವಿಜಯನಗರ ಮತ್ತು ಕೆಳದಿ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ ಉದ್ಯೋಗ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕರಾವಳಿ ಭಾಷೆ ಮಾತನಾಡು ಹಳೆಪೈಕರು, ತುಳು ಮಾತನಾಡುವು ಬಿಲ್ಲವರು ಕೂಡ ತಮ್ಮನ್ನು ಹಳೆಪೈಕರೆಂದು ಕರೆದುಕೊಳ್ಳುತ್ತಾರೆ ಎಂದು ತರ್ಸನ್ ಮತ್ತು ಕೆ.ರಂಗಾಚಾರಿಯವರು ತಮ್ಮ “Caste and Tribe of Southern India” ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹಳೆಪೈಕರ ಗುರುವಾದ ಮೈಸೂರು ಪ್ರಾಂತ್ಯದ ಸಾಗರ ಲೋಕಾಚಾರ್ಯ ಇವರ ಮೂಲದ ಬಗ್ಗೆ ಒಂದು ಕತೆಯನ್ನು ಹೇಳುತ್ತಾರೆ.
ವಿಜಯನಗರದ ಅರಸು ವಿಜಯರಾಮ ಭೂಪಾಲದ ಕಾಲದಲ್ಲಿ ಅವರ ಸೇವಕನಾದ ರಂಗನಾಯಕ ಹಾಗೂ ಅವರ ಹೆಂಡತಿ ಭಾಮಿನಿಗೆ ಶ್ರೀಲಕ್ಷ್ಮಿಯ ಅನುಗ್ರಹದಿಂದ ಒಂದು ಗಂಡುಮಗುವಾಗುತ್ತದೆ. ಅದು ಕುಮಾರಕ್ಷೇತ್ರ ಎನ್ನುವ ಸ್ಥಳ. ಸುಮಾರು 1143ನೇ ಶಕವರ್ಷದಲ್ಲಿ ಕಾರ್ತಿಕದ ಏಳನೇ ದಿನ ಆ ಮಗುವಿಗೆ ನಾರಾಯಣ ಎಂದು ಹೆಸರಿಡುತ್ತಾರೆ. ಒಂದು ದಿನ ನಾರಾಯಣನೆಂಬ ಈ ಮಗು ಬೀದಿಯಲ್ಲಿ ಆಡುತ್ತಿರುವಾಗ ವಿಜಯರಾಮ ಭೂಪಾಲನ ಮಗ ಗೋಪಾಲಕೃಷ್ಣ ರಾಜನು ರಥದ ಮೇಲೆ ಆ ದಾರಿಯಲ್ಲಿ ಹಾದುಹೋಗುತ್ತಿರುವಾಗ ಈ ಮಗುವನ್ನು ನೋಡುತ್ತಾನೆ. ಆ ಮುಗುವಿನಲ್ಲಿದ್ದ ರಾಜಕಳೆಯನ್ನು ನೋಡಿ, ಎತ್ತಿಕೊಂಡು ಹೋಗಿ ಅರಮನೆಯಲ್ಲಿ ಬೆಳೆಸುತ್ತಾನೆ. ಅವನು ಹದಿನಾರನೆಯ ವಯಸ್ಸಿಗೆ ರಾಜಕುಮಾರನಿಗೆ ಕೊಡುವ ಶಿಕ್ಷಣವನ್ನು ಕೊಡಿಸುತ್ತಾನೆ. ಆಡಲಿತ ಪ್ರಮುಖ ವಿಷಯಗಳನ್ನು ನಿರ್ವಹಿಸಲು ನೇಮಕ ಮಾಡಲಾಗುತ್ತದೆ. ನಂತರ ಅವನನ್ನು ಸೇನಾನಾಯಕ್ಕನನ್ನಾಗಿ ಮಾಡುತ್ತಾ ಅವನ ಅಪ್ರತಿಮ ಸಾಹಸ ಕಾರ್ಯವನ್ನು ನೋಡಿ ಮೆಚ್ಚಿ ಗೌರವಿಸಲಾಗುತ್ತದೆ.
ಮುಂದೆ ಓದಿ